ಪಾರು ವೈಫ್ ಆಫ್ ದೇವದಾಸ್ - ಇದು ೨೦೧೪ ರ ಕನ್ನಡ ರೊಮ್ಯಾಂಟಿಕ್ ಹಾಸ್ಯ ಚಿತ್ರವಾಗಿದ್ದು, ಶ್ರೀನಗರ ಕಿಟ್ಟಿ ಮತ್ತು ಸೌಂದರ್ಯ ಜಯಮಾಲಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಕಿರಣ್ ಗೋವಿ ನಿರ್ದೇಶಿಸಿದ್ದಾರೆ. ಕೃಷ್ಣ ದೇವ ಗೌಡ ಮತ್ತು ಮುಖ್ತಾರ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಚಿತ್ರವು ೨೭ ಜೂನ್ ೨೦೧೪ ರಂದು ಬಿಡುಗಡೆಯಾಗಲಿತ್ತು. == ಪಾತ್ರವರ್ಗ == ಶ್ರೀನಗರ ಕಿಟ್ಟಿ ಸೌಂದರ್ಯ ಜಯಮಾಲಾ ನೇಹಾ ಪಾಟೀಲ್ ಲಯೇಂದ್ರ ವಿ.ಮನೋಹರ್ ಮೋಹನ್ ಜುನೇಜಾ == ಧ್ವನಿಮುದ್ರಿಕೆ == ಚಿತ್ರದ ಆಡಿಯೋವನ್ನು ಮಾರ್ಚ್ ೨೦೧೪ ರಲ್ಲಿ ಬೆಂಗಳೂರಿನ ಹೋಟೆಲ್ ಸಿಟಾಡೆಲ್‌ನಲ್ಲಿ ಬಿಡುಗಡೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಖ್ಯಾತ ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ್ ಮತ್ತು ಅವರ ಪತಿ ಸಂಗೀತಗಾರ ಗುರುರಾಜ್ ಉಪಸ್ಥಿತರಿದ್ದರು. ಚಿತ್ರದ ಹಾಡುಗಳನ್ನು ಹಾಡಲು ಪ್ರತಿಭಾ ಪ್ರದರ್ಶನಗಳಲ್ಲಿ ವಿಜೇತರಾದ ಸ್ಥಳೀಯ ಪ್ರತಿಭೆಗಳನ್ನು ನಿರ್ದೇಶಕರು ಆಯ್ಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆರು ಹಾಡುಗಳನ್ನು ಒಳಗೊಂಡಿರುವ ಸಂಗೀತವನ್ನು ಅರ್ಜುನ್ ಜನ್ಯ ಸಂಯೋಜಿಸಿದ್ದಾರೆ. ಐದು ಹಾಡುಗಳನ್ನು ನಾಗೇಂದ್ರ ಪ್ರಸಾದ್ ಬರೆದಿದ್ದರೆ, ಒಂದು ಸಿಂಗಲ್ ಅನ್ನು ಜಯಂತ್ ಕಾಯ್ಕಿಣಿ ಬರೆದಿದ್ದಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಒನ್ಇಂಡಿಯಾ ಮಾಹಿತಿ 2014-07-08 ವೇಬ್ಯಾಕ್ ಮೆಷಿನ್ ನಲ್ಲಿ. ಹಾಡುಗಳ ಪಟ್ಟಿ